Job Description: ನ್ಯೂಯಾರ್ಕ್ : ವಿಶ್ವದ ಪ್ರಥಮ ಯೋಗ ವಿಶ್ವವಿದ್ಯಾನಿಲಯವನ್ನು ಅಮೆರಿಕದ ಲಾಸ್ ಏಂಜಲೀಸ್ ನಗರದಲ್ಲಿ ಆರಂಭಿಸಲಾಗಿದೆ. ಈ ಭಾರತದ ಹೊರಗೆ ಸ್ಥಾಪನೆಯಾದ ಈ ವಿವಿಗೆ ವಿವೇಕಾನಂದ ಯೋಗ ಯೂನಿವರ್ಸಿಟಿ (ವಯು) ಎಂದು ಹೆಸರಿಸಲಾಗಿದೆ. ಇದು ವಿಶ್ವದಲ್ಲಿಯೇ ಮೊದಲ ಯೋಗ ವಿವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. * ಯೋಗಾಸನವು ಒಂದು ಭಾರತೀಯ ಪ್ರಾಚೀನ ವ್ಯಾಯಾಮದ ಪ್ರಾಕಾರವಾಗಿದ್ದು, ಇದರೊಂದಿಗೆ ವೈಜ್ಞಾನಿಕ ವಿಧಾನಗಳ ಮತ್ತು ಅತ್ಯಾಧುನಿಕ ಸಂಶೋಧನೆಗಳ ಮೇಲೆ ಈ ವಿವಿ ಕೇಂದ್ರೀಕರಿಸಲಿದೆ. * ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಕುಲಪತಿ ಮತ್ತು ಭಾರತದ ಖ್ಯಾತ ಯೋಗಗುರು ಡಾ.ಎಚ್.ನಾಗೇಂದ್ರ ಈ ವಿವಿಯ ಪ್ರಥಮ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.