Job Description: ನೆರೆಯ ಪಾಕಿಸ್ತಾನ ರಾಷ್ಟ್ರಕ್ಕೆ ಮತ್ತೆ ಜಾಗತಿಕ ಮಟ್ಟದಲ್ಲಿ ಮುಖಭಂಗವಾಗಿದ್ದು, ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುವುದನ್ನು ತಡೆಗಟ್ಟಲು ಇರುವ ಜಾಗತಿಕ ಕಣ್ಗಾವಲು ಸಂಸ್ಥೆ (ಎಫ್ ಎಟಿಎಫ್) ಯು ಮತ್ತೆ ಪಾಕಿಸ್ತಾನವನ್ನು ಗ್ರೇ (ಬೂದು) ಪಟ್ಟಿಯಲ್ಲೇ ಮುಂದುವರೆಸಲು ತೀರ್ಮಾನಿಸಿದೆ. ಇದರಿಂದಾಗಿ ಪಾಕಿಸ್ತಾನದ ಮಟ್ಟಿಗೆ ಜಾಗತಿಕ ಮಟ್ಟದಲ್ಲಿ ತೀವ್ರ ಹಿನ್ನೆಡೆಯಾಗಿದೆ. * ಲಷ್ಕರ್-ಎ-ತೊಯ್ಬಾ (ಎಲ್ಇಟಿ), ಜೈಶ್-ಎ-ಮೊಹಮ್ಮದ್ (ಜೆಇಎಂ) ಸೇರಿದಂತೆ ಹಲವು ಉಗ್ರ ಸಂಘಟನೆಗಳಿಗೆ ಸಿಗುವ ಆರ್ಥಿಕ ಬೆರವನ್ನು ತಡೆಯಲು ಪಾಕಿಸ್ತಾನಕ್ಕೆ ಸಾಧ್ಯವಾಗದ ಕಾರಣ ಈ ದೇಶವನ್ನು ಗ್ರೇ ಪಟ್ಟಿಯಲ್ಲೇ ಉಳಿಸಲಾಗುತ್ತಿದೆ ಎಂದು ಎಫ್ಟಿಎಎಫ್ ತಿಳಿಸಿದೆ.