Job Description: ಮೈಸೂರು: ಸಾಹಿತಿ ಹಾಗೂ ಭಾಷಾವಿಜ್ಞಾನಿ, ಡಾ.ಬಿ.ಬಿ.ರಾಜಪುರೋಹಿತ ಅವರು ತಮ್ಮ 85 ನೇ ವಯಸ್ಸಿನಲ್ಲಿ ಮೈಸೂರು ನಗರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. * ಭೀಮಾಜಿ ಬಂಡೋ ರಾಜಪುರೋಹಿತ ಮತ್ತು ಸಾವಿತ್ರಿಬಾಯಿ ಅವರ ಪುತ್ರರಾದ ಇವರು, ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ 1935ರ ಮೇ 20ರಂದು ಜನಿಸಿದರು. * ಕೇರಳ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರ ಉಪನ್ಯಾಸಕರಾಗಿ, ಭಾರತೀಯ ಭಾಷಾ ಸಂಸ್ಥಾನದಲ್ಲಿ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. * ಜಪಾನಿನ ಟೋಕಿಯೊ ಯೂನಿವರ್ಸಿಟಿ ಆಫ್ ಫಾರಿನ್ ಸ್ಟಡೀಸ್‌ನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. * ಸ್ಥಳನಾಮಗಳು ಮತ್ತು ಭಾಷಾವಿಜ್ಞಾನ ಕುರಿತು ಇಂಗ್ಲಿಷ್‌ನಲ್ಲಿ 10 ಕೃತಿಗಳನ್ನು, ವಚನ ಸಾಹಿತ್ಯ ಕುರಿತು ಕನ್ನಡದಲ್ಲಿ 4 ಹಾಗೂ ಇತರ 10 ಸಾಹಿತ್ಯಕ ಕೃತಿಗಳನ್ನು ರಚಿಸಿದ್ದಾರೆ. 250ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. * ಡಾ.ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನಿಂದ ನೀಡಲಾಗುವ 2012ನೇ ಸಾಲಿನ ಅಂಬಿಕಾತನಯ ದತ್ತ ಪ್ರಶಸ್ತಿ ಹಾಗೂ ಬೇಂದ್ರೆ ಸಂಶೋಧನಾ ಸಂಸ್ಥೆಯ 'ಬೇಂದ್ರೆ ಭಾಷಾಶಾಸ್ತ್ರ ರತ್ನ' ಪ್ರಶಸ್ತಿಗೆ ಇವರು ಭಾಜನರಾಗಿದ್ದರು.