Job Description: ನವದೆಹಲಿ: ಯೋಗಗುರು ಬಾಬಾ ರಾಮದೇವ ಅವರ ಪತಂಜಲಿ ಬ್ರಾಂಡ್ ಮೂಲಕ ಹೊರತಂದಿರುವ 'ಕೋವಿಡ್-19 ಗುಣಪಡಿಸಲಿದೆ ಎಂದು ಹೇಳಿಕೊಂಡಿರುವ ಔಷಧ ವಿವರಗಳನ್ನು ಆದಷ್ಟು ಬೇಗ ಕೊಡಬೇಕು ಹಾಗೂ ಈ ಔಷದಿಯ ಪರಿಶೀಲನೆ ಮುಗಿಯುವ ವರೆಗೂ ಈ ಉತ್ಪನ್ನ ಕುರಿತು ಯಾವುದೇ ಜಾಹೀರಾತು ನೀಡಬಾರದು' ಆಯುಷ್ ಸಚಿವಾಲಯ ಪತಂಜಲಿ ಸಂಸ್ಥೆಗೆ ತಿಳಿಸಿದೆ. * "ಕೊರೊನಿಲ್" ಮತ್ತು "ಸ್ವಸರಿ" ಎಂಬ ಔಷಧ ಬಿಡುಗಡೆ ಮಾಡಿದ್ದ ಪತಂಜಲಿ, ಇದು 7 ದಿನಗಳೊಳಗಾಗಿ ಶೇಕಡಾ 100 ರಷ್ಟು ಕೋವಿಡ್ ಗುಣಪಡಿಸಲಿದೆ ಎಂದು ಹೇಳಿತ್ತು. ಜಗತ್ತಿನಾದ್ಯಂತ ವಿಜ್ಞಾನಿಗಳು ಕೋವಿಡ್-19ಕ್ಕೆ ಪರಿಣಾಮಕಾರಿ ಔಷಧ ಪತ್ತೆ ಹಚ್ಚಲು ಕಸರತ್ತು ನಡೆಸಿರುವ ಬೆನ್ನಲ್ಲೇ, ಪತಂಜಲಿ ಸಂಸ್ಥೆ ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡಬಲ್ಲ ಆಯುರ್ವೇದ ಔಷಧಿಯನ್ನು ಅಭಿವೃದ್ಧಿಪಡಿಸಿದ್ದಾಗಿ ತಿಳಿಸಿದೆ.