Job Description: ನವದೆಹಲಿ : ಪೂರ್ವ ಲಡಾಖ್ ಪ್ರದೇಶದ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿದ್ದು, ಈ ಘರ್ಷಣೆಯಲ್ಲಿ ಭಾರತದ 20 ಯೋಧರು ಸೇರಿ ಚೀನಾ ರಾಷ್ಟ್ರದ 43 ಯೋಧರು ಹತ್ಯೆ ನಡೆದಿರುವದಾಗಿ ವರದಿಯಾಗಿದೆ. ಈ ಮೂಲಕ 53 ವರ್ಷಗಳ ಬಳಿಕ ಚೀನಾದಿಂದ ಈ ನೀಚ ಕೃತ್ಯ ನಡೆಸಲಾಗಿದೆ. ಈ ಉಭಯ ರಾಷ್ಟ್ರಗಳ ಘರ್ಷಣೆಯಲ್ಲಿ ಯಾವುದೇ ಗುಂಡಿನ ಚಕಮಕಿ ನಡೆದಿಲ್ಲ. ಬದಲಿಗೆ ಕಲ್ಲು, ರಾಡ್, ಬಡಿಗೆಯಿಂದ ಭಾರತದ ಸೈನಿಕರನ್ನು ಹತ್ಯೆ ಮಾಡಲಾಗಿದ್ದು, ಉಭಯ ದೇಶಗಳ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ಇರುವದಾಗಿ ವರದಿಯಾಗಿದೆ. * ಈ ಘಟನೆ ಕುರಿತಂತೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದ್ದು ಉಭಯ ರಾಷ್ಟ್ರಗಳು ದೇಶಗಳು ತಾಳ್ಮೆ ವಹಿಸಬೇಕು ಎಂದು ತಿಳಿಸಿದೆ.