Job Description: ನವದೆಹಲಿ: ಈ ಶತಮಾನದ ಅಂತ್ಯದ ವೇಳೆಗೆ ಭಾರತದ ಸರಾಸರಿ ತಾಪಮಾನ 4.4 ಡಿಗ್ರಿ ಸೆಲ್ಸಿಯಸ್‍ನಷ್ಟು ಹೆಚಾಗುವದಲ್ಲದೆ ಬಿಸಿಲಿನ ಧಗೆ 3 ರಿಂದ 4 ಪಟ್ಟು ಏರಿಕೆಯಾಗಬಹುದಾದ ಸಾಧ್ಯತೆಯಿದೆ ಎಂದು ಸರಕಾರದ ವರದಿ ತಿಳಿಸಿದೆ. * ಭಾರತದ ಸರಾಸರಿ ತಾಪಮಾನ 1901-2018ರ ನಡುವೆ ಸುಮಾರು 0.7 ಡಿಗ್ರಿ ಸೆಲ್ಸಿಯಸ್‍ನಷ್ಟು ಏರಿಕೆಯಾಗಿದೆ ಹಾಗೂ ಇದು ಹಸಿರು ಮನೆ ಅನಿಲಗಳಿಂದ (ಗ್ರೀನ್ ಹೌಸ್ ಗ್ಯಾಸ್) ಉಂಟಾಗಿದೆ, ಎಂದು ಭೂ ವಿಜ್ಞಾನ ಸಚಿವಾಲಯದ ವರದಿ ತಿಳಿಸಿದೆ. * ವರದಿಯನ್ನು ಭೂವಿಜ್ಞಾನಗಳ ಸಚಿವಾಲಯದ ಅಧೀನದಲ್ಲಿ ಬರುವ ಪುಣೆಯ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮಿಟ್ಯೊರಾಲಜಿಯ ಘಟಕವಾದ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್ ರಿಸರ್ಚ್ ತಯಾರಿಸಿದೆ. * ಈ ಶತಮಾನದ ಅಂತ್ಯದೊಳಗೆ ಗರಿಷ್ಠ ತಾಪಮಾನದ ದಿನ ಹಾಗೂ ಕನಿಷ್ಠ ತಾಪಮಾನದ ರಾತ್ರಿಯ ತಾಪಮಾನಗಳಲ್ಲಿ ಕ್ರಮವಾಗಿ 4.7 ಹಾಗೂ 5.5 ಡಿಗ್ರಿ ಸೆಲ್ಸಿಯಸ್‍ನಷ್ಟು ಏರಿಕೆಯಾಗಲಿದೆ.