Job Description: ನವದೆಹಲಿ: ಬ್ರಹ್ಮೋಸ್ ವಾಯು ಉಡಾಯಿತ ಕ್ರೂಸ್ ಕ್ಷಿಪಣಿ (ALCM)ಗೆ ಎಫ್‌ಆರ್‌ಸಿ ಪ್ರಮಾಣ ಪತ್ರ ಸಿಕ್ಕಿದೆ. ಭಾರತೀಯ ವಾಯುಪಡೆಯಲ್ಲಿ ಎಫ್‌ಆರ್‌ಸಿ ಪ್ರಮಾಣ ಪತ್ರ ಪಡೆದ ಮೊದಲ ಕ್ಷಿಪಣಿ ಎಂಬ ಹೆಗ್ಗಳಿಕೆಗೆ ಬ್ರಹ್ಮೋಸ್ ಪಾತ್ರವಾಗಿದೆ. * ಜೂನ್ 10 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿವಿಧ ಭಾಗಿದಾರರ ಉನ್ನತ ಮಟ್ಟದ ಸಭೆಯಲ್ಲಿ ಬ್ರಹ್ಮೋಸ್ ಕ್ಷಿಪಣಿಗೆ FRC ನೀಡಲಾಗಿದೆ. ಡಿಆರ್‌ಡಿಓ, ಎಎಸ್‌ಟಿಇ, ಎಸ್‌ಡಿಐ ಸೇರಿದಂತೆ ವಿವಿಧ ಭಾಗಿದಾರರು ಸಭೆಯಲ್ಲಿ ಭಾಗಿಯಾಗಿದ್ದರು. * ಬ್ರಹ್ಮೋಸ್ ಕ್ಷಿಪಣಿಯನ್ನು DRDO ತಯಾರಿಸಿದ್ದು, ಭೂಮಿ, ಆಕಾಶ ಮತ್ತು ಸಮುದ್ರದಿಂದಲೂ ಉಡಾಯಿಸಬಹುದಾಗಿದೆ. ಬ್ರಹ್ಮೋಸ್ ವಿಶ್ವದ ಶಬ್ದಾತೀತ ವೇಗದ ಕ್ಷಿಪಣಿಗಳಲ್ಲಿ ಒಂದಾಗಿದೆ. ಈಗಾಗಲೇ ಈ ಕ್ಷಿಪಣಿಯ ಪರೀಕ್ಷೆ ಯಶ್ವಸ್ವಿಯಾಗಿದೆ. * ರಷ್ಯಾ ಮತ್ತು ಭಾರತದ ಸಹಭಾಗಿತ್ವದಲ್ಲಿ ಬ್ರಹ್ಮೋಸ್ ಕ್ಷಿಪಣಿ ಸಿದ್ಧವಾಗಿದೆ. 2007ರಲ್ಲಿ ಭೂಮಿಯಿಂದ ಭೂಮಿಗೆ ಉಡಾವಣೆಗೊಳ್ಳುವ ಬ್ರಹ್ಮೋಸ್ ಕ್ಷಿಪಣಿ ಸೇನೆಯನ್ನು ಸೇರಿತ್ತು. ಆಕಾಶದಿಂದ ಉಡಾಯನ ಮಾಡಲು ಈಗ FRC ಸಿಕ್ಕಿದೆ. * 2014ರಲ್ಲಿ ಸಮುದ್ರದಿಂದಲೂ ಉಡಾವಣೆ ಮಾಡಬಲ್ಲ ಬ್ರಹ್ಮೋಸ್ ಕ್ಷಿಪಣಿ ನೌಕಾಪಡೆಗೆ ಸೇರ್ಪಡೆಗೊಂಡಿತ್ತು. ರಷ್ಯಾದ ಪಿ-800 ಕ್ಷಿಪಣಿ ಮಾದರಿಯಲ್ಲಿಯೇ ಬ್ರಹ್ಮೋಸ್ ತಯಾರು ಮಾಡಲಾಗಿದೆ. ಭಾರತ ಮತ್ತು ರಷ್ಯಾದ ಎರಡು ನದಿಗಳ ಹೆಸರನ್ನು ಸೇರಿಸಿ ಕ್ಷಿಪಣಿಗೆ ಬ್ರಹ್ಮೋಸ್ ಎಂದು ನಾಮಕರಣ ಮಾಡಲಾಗಿದೆ.