Job Description: ನವದೆಹಲಿ: ಇದೆ ಜೂನ್ 22 ರಂದು ಭಾರತದ ವಿದೇಶಾಂಗ ವ್ಯಹಾರಗಳ ಸಚಿವ ಎಸ್. ಜೈಶಂಕರ್ ಅವರು ಚೀನಾ ಹಾಗೂ ರಷ್ಯಾದ ರಾಷ್ಟ್ರಗಳ ವಿದೇಶಾಂಗ ವ್ಯವಹಾರಗಳ ಸಚಿವರೊಂದಿಗೆ ಆನ್‌ಲೈನ್ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎರಡು ರಾಷ್ಟ್ರಗಳ ಸಮಸ್ಯೆಗಳನ್ನು ಸಾಮಾನ್ಯವಾಗಿ ಮೂರನೇ ರಾಷ್ಟ್ರದ ಸಮ್ಮುಖದಲ್ಲಿ ಚರ್ಚಿಸುವುದಿಲ್ಲವಾದ್ದರಿಂದ, ಈ ಸಭೆಯಲ್ಲಿ ಭಾರತ-ಚೀನಾ ಗಡಿ ಸಮಸ್ಯೆ ಕುರಿತ ಚರ್ಚೆಯಾಗುವ ಸಾಧ್ಯತೆಗಳು ಕಡಿಮೆ ಎಂದು ಮೂಲಗಳು ತಿಳಿಸಿವೆ.