Job Description: ಸ್ವೀಡಿಷ್ ಥಿಂಕ್-ಟ್ಯಾಂಕ್ 2020 ರ ವಾರ್ಷಿಕ ಪುಸ್ತಕವನ್ನು (YearBook) SIPRI ಪ್ರಕಟಿಸಿದ್ದು, ವಾರ್ಷಿಕ ಪುಸ್ತಕದ ಪ್ರಕಾರ, ಭಾರತ ಮತ್ತು ಚೀನಾಗಳು ಕಳೆದ ವರ್ಷ 2019 ಕ್ಕೆ ಹೋಲಿಸಿದರೆ ತಮ್ಮ ಪರಮಾಣು ಶಸ್ತ್ರಾಸ್ರ್ತಗಳನ್ನು ಹೆಚ್ಚಿಸಿಕೊಂಡಿವೆ. ಚೀನಾ ರಾಷ್ಟ್ರವು ತನ್ನ ಪರಮಾಣು ಶಸ್ತ್ರಾಗಾರವನ್ನು ಆಧುನೀಕರಿಸುತ್ತಿದೆ ಎಂದು ಥಿಂಕ್ ಟ್ಯಾಂಕ್ ವರದಿ ಮಾಡಿದೆ. ಅಲ್ಲದೆ ಭಾರತಕ್ಕೆ ಹೋಲಿಸಿದರೆ ಚೀನಾ ಮತ್ತು ಪಾಕಿಸ್ತಾನ ಹೆಚ್ಚು ಪರಮಾಣು ಸಿಡಿತಲೆಗಳನ್ನು ಹೊಂದಿರುವದಾಗಿ ವರದಿಯಾಗಿದೆ. ಥಿಂಕ್ ಟ್ಯಾಂಕ್ SIPRI YearBook ನ ಪ್ರಮುಖಾಂಶಗಳು: * ಭಾರತವು ಒಟ್ಟು 150 ಪರಮಾಣು ಯುದ್ಧ ಸಿಡಿತೆಲೆಗಳನ್ನ ಹೊಂದಿದೆ. * ಚೀನಾದಲ್ಲಿ 290 ಮತ್ತು ಪಾಕಿಸ್ತಾನವು ಸುಮಾರು 150 ರಿಂದ 160 ಪರಮಾಣು ಯುದ್ಧ ಸಿಡಿತೆಲೆಗಳನ್ನ ಹೊಂದಿದೆ. * ಭಾರತ ತನ್ನ ಪರಮಾಣು ಶಸ್ತ್ರಾಸ್ತ್ರ ಸಂಗ್ರಹ ರಾಶಿ ಮತ್ತು ಪರಮಾಣು ಮೂಲಸೌಕರ್ಯಗಳನ್ನು ವಿಸ್ತರಿಸುತ್ತಿದೆ ಎಂದು ವರದಿ ಹೇಳಿದೆ. * ಚೀನಾ ಮೊದಲ ಬಾರಿಗೆ ಪರಮಾಣು ಟ್ರೈಡ್ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಥಿಂಕ್ ಟ್ಯಾಂಕ್ ಹೇಳುತ್ತದೆ.