Job Description: ಲಾಸ್ ಏಂಜಲಿಸ್ : ಜಾಗತಿಕವಾಗಿ ವ್ಯಾಪಿಸಿರುವ ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ವಿಶ್ವ ಚಿತ್ರರಂಗದ ಅತ್ಯುನ್ನತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನೂ ಮುಂದಿನ ವರ್ಷದ ಎಪ್ರಿಲ್ 25ಕ್ಕೆ ಮುಂದೂಡಲಾಯಿತು. 93ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಎಂಟು ವಾರ ಮುಂದಕ್ಕೆ ಹಾಕಲಾಗಿದೆ ಎಂದು ಹಾಲಿವುಡ್ ವೇಳಾಪಟ್ಟಿ ಬಿಡುಗಡೆ ಮಾಡಿರುವ ಅಕಾಡಮಿ ಸ್ಪಷ್ಟಪಡಿಸಿದೆ. ಆಸ್ಕರ್‌ಗೆ ಅರ್ಹ ಚಿತ್ರಗಳನ್ನು ಸಲ್ಲಿಸಲು ಗಡುವನ್ನು ಡಿಸೆಂಬರ್ 31ರಿಂದ 2021ರ ಫೆಬ್ರುವರಿ 28ಕ್ಕೆ ಮುಂದೂಡಲಾಗಿದ್ದು, ಇದೆ ಕಾರಣದಿಂದ ಪ್ರಶಸ್ತಿ ಪ್ರದಾನ ಸಮಾರಂಭ ವಿಸ್ತರಿಸಿರುವುದರಿಂದ ಚಿತ್ರ ನಿರ್ಮಾಪಕರು ತಮ್ಮ ಚಿತ್ರ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಮತ್ತು ಚಿತ್ರಗಳನ್ನು ಬಿಡುಗಡೆ ಮಾಡಲು ಸಮಯಾವಕಾಶ ನೀಡಿದಂತಾಗಿದೆ ಎಂದು ಅಕಾಡಮಿ ಅಧ್ಯಕ್ಷ ಡೇವಿಡ್ ರುಬಿನ್ ಮತ್ತು ಸಿಇಓ ಡ್ವಾನ್ ಹಡ್ಸನ್ ಹೇಳಿಕೆ ನೀಡಿದ್ದಾರೆ.