Job Description: ವಿಶಾಖಪಟ್ಟಣಂ : ಈಸ್ಟರ್ನ್ ನೇವಲ್ ಕಮಾಂಡ್ (ENC) ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಬಿಸ್ವಜಿತ್ ದಾಸ್‌ಗುಪ್ತಾ ಅವರು ನೇಮಕಗೊಂಡಿದ್ದು, ದಿನಾಂಕ 12 ಜೂನ್ ರಿಂದ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಮೊದಲು ಈ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈಸ್ ಅಡ್ಮಿರಲ್ ಎಸ್. ಎನ್. ಘೋರ್ಮಡೆ ಯವರು ನವದೆಹಲಿಯ ರಕ್ಷಣಾ ಸಚಿವಾಲಯದ (ನೌಕಾಪಡೆ) ಇಂಟಿಗ್ರೇಟೆಡ್ ಹೆಡ್ ಕ್ವಾರ್ಟರ್ಸ್ ನಿಯಂತ್ರಕ ಸಿಬ್ಬಂದಿಯಾಗಿ ವರ್ಗಾವಣೆಗೊಂಡ ಹಿನ್ನಲೆ ದಾಸ್‌ಗುಪ್ತಾ ನೂತನವಾಗಿ ಈ ಅಧಿಕಾರ ವಹಿಸಿಕೊಂಡರು. ದಾಸ್‌ಗುಪ್ತಾ ಅವರು ಕಾರ್ಯಾಚರಣೆ, ತರಬೇತಿ, ಸಿಬ್ಬಂದಿ ನೇಮಕಾತಿ, ನಿರ್ದೇಶನದಂತಹ ಹಲವು ಪ್ರಮುಖ ಜವಾಬ್ದಾರಿ ನಿರ್ವಹಿಸಿದ ಅನುಭವ ಹೊಂದಿದ್ದು, ಇವರ ಸೇವೆ ಪರಿಗಣಿಸಿ ಅತಿ ವಿಶಿಷ್ಟ್ ಸೇವಾ ಪದಕ ಮತ್ತು ವಿಶಿಷ್ಠ್ ಸೇವಾ ಪದಕ ಗೌರವಕ್ಕೆ ಪಾತ್ರರಾಗಿದ್ದಾರೆ.