Job Description: 68 ವರ್ಷದ Kathy Sullivan ಸಮುದ್ರಮಟ್ಟದಿಂದ 36,070 ಅಡಿ ಆಳಕ್ಕೆ ಇಳಿಯುವ ಮೂಲಕ ವಿಶ್ವದ ಅತ್ಯಂತ ಆಳದ ಕಡಲಿನ ಬಿಂದುವಿಗೆ ತಲುಪಿ ಬಂದ ವಿಶ್ವದ ಮೊದಲ ಮಹಿಳೆ ಎಂಬ ನೂತನ ದಾಖಲೆ ಮಾಡಿದರು. Kathy Sullivan ಅವರು ಪೆಸಿಫಿಕ್ ಮಹಾಸಾಗರದ ಮಾರಿಯಾನ ಟ್ರೆಂಚ್ ಎಂಬ ಪಾತಾಳ ಕಣಿವೆಯಲ್ಲಿರುವ ಅತ್ಯಂತ ಆಳದ ಕೇಂದ್ರಕ್ಕೆ 'ಚಾಲೆಂಜರ್ ಡೀಪ್' (ಆಳ 10,994 ಮೀ) ಇಲ್ಲಿಗೆ 'ಲಿಮಿಟಿಂಗ್ ಫ್ಯಾಕ್ಟರ್' ಎಂಬ ವಿಶೇಷ ವಾಹನದಲ್ಲಿ ತಲುಪುವ ಮೂಲಕ ಈ ಸಾಧನೆ ಮಾಡಿದರು. * 37 ವರ್ಷಗಳ ಹಿಂದೆಯೇ ಬಾಹ್ಯಾಕಾಶದಲ್ಲಿ ನಡೆಯುವ ಮೂಲಕ ಬಾಹ್ಯಾಕಾಶದಲ್ಲಿ ನಡೆದ ಮೊದಲ ಅಮೆರಿಕನ್ ಮಹಿಳೆ ಎಂದು ಸಾಧನೆ ಮಾಡಿದ್ದ, ನಾಸಾದ ಮಾಜಿ ಗಗನಯಾತ್ರಿ Kathy Sullivan ಇದೀಗ ಮತ್ತೊಂದು ಸಾಧನೆ ಮಾಡಿದರು.