Job Description: ನವದೆಹಲಿ: ಮೀಸಲಾತಿಯು ಮೂಲಭೂತ ಹಕ್ಕಲ್ಲವೆಂದು ಸುಪ್ರೀಂಕೋರ್ಟ್ ಬುಧವಾರ ಅಭಿಪ್ರಾಯ ಪಟ್ಟಿದೆ. ತಮಿಳುನಾಡು ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ OBC ವಿದ್ಯಾರ್ಥಿಗಳ ಮೀಸಲು ಖೋಟಾದ ಸೀಟುಗಳನ್ನು ನಿರಾಕರಿಸಿದ್ದ ಪ್ರಕರಣಗಳ ಅರ್ಜಿಗಳನ್ನು ಒಟ್ಟಾಗಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಮೀಸಲಾತಿಯು ಯಾವುದೇ ಭಾರತೀಯನ ಮೂಲಭೂತ ಹಕ್ಕಾಗಿರುವದಿಲ್ಲ ಹಾಗು ಮೀಸಲಾತಿ ತನ್ನ ಮೂಲಭೂತ ಹಕ್ಕೆಂದು ಯಾರೂ ಕೂಡಾ ಪ್ರತಿಪಾದಿಸಲು ಸಾಧ್ಯವಿಲ್ಲ. ಮೀಸಲಾತಿಯ ಸೌಲಭ್ಯಗಳನ್ನು ನೀಡದೆ ಇರುವುದು ಕೂಡ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯೆಂದು ಪರಿಗಣಿಸಲಾಗುವದಿಲ್ಲ ಎಂದು ನ್ಯಾಯಮೂರ್ತಿ ಎಲ್.ನಾಗೇಶ್ವರರಾವ್ ನೇತೃತ್ವದ ನ್ಯಾಯಪೀಠ ಸ್ಪಷ್ಟಪಡಿಸಿತು.