Job Description: ನವದೆಹಲಿ : ಲಯನ್ ಸೆನ್ಸಸ್ 2020ರ ಪ್ರಕಾರ ಗುಜರಾತ್‌ನ ಗಿರ್ ಫಾರೆಸ್ಟ್‌ನಲ್ಲಿ ಶೇಕಡ 29ರಷ್ಟು ಸಿಂಹಗಳ ಸಂಖ್ಯೆ ಹೆಚ್ಚಾಗಿದೆ ಎಂದು ಮಾಹಿತಿ ದೊರೆತಿದೆ. * ಮೇ 2015ರಲ್ಲಿ ಅರಣ್ಯ ಇಲಾಖೆ ಸಿಂಹಗಳ ಸಂಖ್ಯೆಯನ್ನು ಏಣಿಕೆ ಮಾಡಿತ್ತು. ಗಣತಿಯ ಪ್ರಕಾರ ಗುಜರಾತ್‌ನಲ್ಲಿ 523 ಸಿಂಹಗಳು ಇದ್ದವು. ಆದರೆ, ಐದು ವರ್ಷಗಳಲ್ಲಿ ಸಿಂಹದ ಸಂಖ್ಯೆಗಳಲ್ಲಿ ಏರಿಕೆ ಕಂಡಿದೆ. ಒಟ್ಟು 151 ಸಿಂಹಗಳ ಸಂಖ್ಯೆ ಹೆಚ್ಚಾಗಿದೆ. * ದೇಶದಲ್ಲಿ ಅತಿ ಹೆಚ್ಚು ಸಿಂಹಗಳು ಇರುವ ರಾಜ್ಯ ಗುಜರಾತ್ ಆಗಿದೆ. ಸದ್ಯ ಗುಜರಾತ್‌ನ ಗಿರ್ ಫಾರೆಸ್ಟ್‌ನಲ್ಲಿ ಸುಮಾರು 674 ಸಿಂಹಗಳಿವೆ. ಅಲ್ಲದೆ ಸಿಂಹಗಳ ವಿತರಣಾ ವ್ಯಾಪ್ತಿ ಸಹ ಶೇಕಡ 36ರಷ್ಟು ಹೆಚ್ಚಾಗಿದೆ. * ಈ ಕುರಿತು ಪ್ರಧಾನಿ ಮೋದಿಯವರು ಕೂಡ ಟ್ವಿಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.