Job Description: ಚೆನ್ನೈ : ತಮಿಳುನಾಡಿನ ಎಐಎಡಿಎಂಕೆ ಸರ್ಕಾರವು ರಾಜ್ಯದ ಸುಮಾರು 1018 ಪ್ರದೇಶಗಳ ಹೆಸರುಗಳ ಇಂಗ್ಲೀಷ್ ಸ್ಪೆಲ್ಲಿಂಗ್ ಬದಲಾಯಿಸಲು ಮುಂದಾಗಿದೆ. ಚೆನ್ನೈ ಸೇರಿದಂತೆ ತಮಿಳುನಾಡಿನ ರಾಜ್ಯದ ಹಲವು ಪ್ರಮುಖ ಸ್ಥಳಗಳಿಗೆ ಸ್ಥಳೀಯರ ಉಚ್ಚಾರಣೆ ರೀತಿಯಲ್ಲಿ ತಮಿಳರಿಗೆ ಅರ್ಥವಾಗುವಂಥ ಸ್ಪೆಲ್ಲಿಂಗ್ ನೀಡಲು ನಿರ್ಧರಿಸಲಾಗಿದೆ. ತಮಿಳುನಾಡಿನ ಎಲ್ಲಾ 37 ಕಂದಾಯ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹೆಸರು ಬದಲಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದೆಂದು ಎಂದು ತಮಿಳುನಾಡಿನ ಸಂಸ್ಕೃತಿ ಖಾತೆ ಸಚಿವ ಕೆ ಪಾಂಡ್ಯರಾಜನ್ ತಿಳಿಸಿದ್ದಾರೆ.