Job Description: ನವದೆಹಲಿ: ಭಾರತೀಯ ವಾಣಿಜ್ಯ ಮಂಡಳಿಯ 95ನೇ ವಾರ್ಷಿಕ ಸಮಗ್ರ ಅಧಿವೇಶನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ದಿನಾಂಕ 11 ಜೂನ್ ರ ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿ ಭಾಷಣ ಮಾಡಿದರು. * ಇದೆ ವೇಳೆ ಮಾತನಾಡಿದ ಅವರು ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿಸುವ ಕುರಿತು "ಜನರು, ಗ್ರಹ ಮತ್ತು ಲಾಭ" (People, Planet & Profit) ಗಳ ಮೇಲೆ ಕೇಂದ್ರೀಕರಿಸಲು ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಪೂರೈಕೆಯಾ ಸರಪಳಿಗಳನ್ನು ರಚಿಸಲು ಉದ್ಯಮಗಳನ್ನು ಕೇಳಿಕೊಂಡಿದ್ದಾರೆ. * ಜೂನ್ 2ರಂದು ಪ್ರಧಾನಿ ಮೋದಿ ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ(CII)ಯ 125ನೇ ವರ್ಷದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ಮಾತನಾಡಿದ್ದರು.