Job Description: ನವದೆಹಲಿ: ಸ್ವಿಟ್ಜರ್ಲೆಂಡ್ ನ ಭಾರತದ ಮುಂದಿನ ರಾಯಭಾರಿಯಾಗಿ ಮೊನಿಕಾ ಕಪಿಲ್ ಮೊಹ್ತಾ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೇಮಿಸಿ ಪ್ರಕಟಣೆ ಹೊರಡಿಸಿದೆ. ಭಾರತೀಯ ವಿದೇಶಾಂಗ ಸೇವೆಯ 1985ರ ಬ್ಯಾಚಿನ ಅಧಿಕಾರಿಯಾಗಿರುವ ಮೊನಿಕಾ ಪ್ರಸ್ತುತ ಸ್ವಿಡನ್ ದೇಶದ ಭಾರತೀಯ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಶೀಘ್ರದಲ್ಲಿಯೇ ಅವರು ಸ್ವಿಟ್ಜರ್ಲೆಂಡ್ ನ ಭಾರತದ ಮುಂದಿನ ರಾಯಭಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.