Job Description: ಬೆಂಗಳೂರು : ಬೆಂಗಳೂರು ಪೊಲೀಸರು ಇತ್ತೀಚಿಗೆ 'ನಮ್ಮ ಹಿರಿಯರು' ಎಂಬ ವಿನೂತನ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಈ ಕಾರ್ಯಕ್ರಮವು ಸಾರ್ವಜನಿಕರಿಂದ ಅಪಾರ ಮೆಚ್ಚುಗೆ ಪಡೆದಿದ್ದು, ಹಿರಿಯರಿಗೆ ಯಾವುದೇ ಸಮಸ್ಯೆ ಇದ್ದರೂ, ಸಾರ್ವಜನಿಕರು "ನಮ್ಮ ಹಿರಿಯರು" ಕಾರ್ಯಕ್ರಮದ ಮೂಲಕ ಪೊಲೀಸ ಇಲಾಖೆಯನ್ನು ಸಂಪರ್ಕಮಾಡಬಹುದು. ಅಲ್ಲದೆ ಮನೆಯಲ್ಲಿ ಇರುವ ಹಿರಿಯರು ತಮಗೆ ಬೇಕಾದ ಸಹಾಯ ಮತ್ತು ರಕ್ಷಣೆಯನ್ನು ಪೊಲೀಸರ ಮೂಲಕ ಪಡೆಯಬಹುದಾಗಿದೆ. * ಈ ಯೋಜನೆಗೆ ನಟ ರಮೇಶ್ ಅರವಿಂದ್ ಕೈ ಜೋಡಿಸಿದ್ದಾರೆ. * 8277946994 & 8277946995 ಈ ಎರಡು ವಾಟ್ಸ್ ಅಪ್ ನಂಬರ್‌ಗಳಿಗೆ ಕರೆ ಅಥವಾ ಸಂದೇಶಗಳ ಮೂಲಕ ಹಿರಿಯರು ಸದಸ್ಯರಾಗಬೇಕು, ಬಳಿಕ ಈ ವಿವರ ಪೊಲೀಸರ ಬಳಿ ಸದಾ ಇರುತ್ತದೆ.