Job Description: ಮಾಸ್ಕೋ : ಜಾಗತಿಕವಾಗಿ ವ್ಯಪಿಸಿರುವ ಕೊರೊನಾ ಸಂಕಷ್ಟದಿಂದಾಗಿ ತೈಲ ಬೆಲೆಯಲ್ಲಿ ತೀವ್ರ ಏರುಪೇರುಗಳಾಗಿದ್ದು, ಈ ತೈಲ ಬೆಲೆ ಬಿಕ್ಕಟ್ಟು ಶಮನಗೊಳಿಸಲು ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಘಟನೆ (ಒಪೆಕ್) ಮತ್ತು ಮಿತ್ರ ರಾಷ್ಟ್ರಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಜುಲೈ ತಿಂಗಳ ಅಂತ್ಯದ ವರೆಗೆ ಪ್ರತಿ ದಿನ ಸೀಮಿತ ಒಂದು ಕೋಟಿ ಬ್ಯಾರೆಲ್ ತೈಲ ಮಾತ್ರ ಉತ್ಪಾದಿಸಲು ಹಾಗು ಈ ಮೂಲಕ ತೈಲ ಬೆಲೆಯಲ್ಲಿ ಹಿಡಿತ ಸಾಧಿಸುವ ನಿರ್ಧಾರಕ್ಕೆ ಸಮ್ಮತಿಸಿವೆ. ಈ ಸಭೆಯಲ್ಲಿ ವಿವಿಧ ದೇಶಗಳ ಸಚಿವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಿ ಬೆಲೆ ನಿಯಂತ್ರಣಕ್ಕಾಗಿ ಉತ್ಪಾದನೆ ಕಡಿತಗೊಳಿಸಲು ಕೈಗೊಳ್ಳಬಹುದಾದ ಕ್ರಮಗಳು ಸೇರಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.