Job Description: ವಿಶ್ವಸಂಸ್ಥೆ (ನ್ಯೂಯಾರ್ಕ್) : ವಿಶ್ವಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಂತಿಪಾಲನಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಮಹಿಳಾ ಸೇನಾಧಿಕಾರಿಯಾದ ಮೇಜರ್ ಸುಮನ್ ಗವಾನಿ ಅವರು ಪ್ರತಿಷ್ಠಿತ ಯುನೈಟೆಡ್ ನೇಶನ್ಸ್ ಮಿಲಿಟರಿ ಜಂಡರ್ ಆಯಡ್ವಕೇಟ್ ಆಫ್ ದ ಈಯರ್ ಪ್ರಶಸ್ತಿ (2019)ಗಾಗಿ ಆಯ್ಕೆಯಾಗಿದ್ದಾರೆ. ಇವರ ಜೊತೆ ಬ್ರೆಝಿಲ್‌ನ ಓರ್ವ ಮಹಿಳಾ ಸೇನಾಧಿಕಾರಿಯಾದ ಕಮಾಂಡರ್ ಕಾರ್ಲಾ ಮೋಂಟೇರೊ ಡಿ ಕ್ಯಾಸ್ಟ್ರೊ ಅರಾವುಜೊ ಅವರು ಕೂಡ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಇಬ್ಬರು ಸೇನಾಧಿಕಾರಿಗಳು ಇದೆ ಮೇ 29ರಂದು ಆನ್‌ಲೈನ್ ನಲ್ಲಿ ನಡೆಯಲಿರುವ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ. ಈ ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ವಹಿಸಿಕೊಳ್ಳಲಿದ್ದಾರೆ. * ಮೇ 29 ಅಂತರ್‌ರಾಷ್ಟ್ರೀಯ ವಿಶ್ವಸಂಸ್ಥೆಯ ಶಾಂತಿಪಾಲಕರ ದಿನವಾಗಿದೆ.