Job Description: ಬೆಂಗಳೂರು: ಗದಗದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದ ನೂತನ ಕುಲಪತಿಗಳನ್ನಾಗಿ ಡಾ.ವಿಷ್ಣುಕಾಂತ ಎಸ್.ಚಟ್ಟಪಲ್ಲಿ ಅವರನ್ನು ರಾಜ್ಯಪಾಲರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಇವರು ಇಲ್ಲಿಯವರೆಗೆ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ MBA ವಿಭಾಗದಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಹುದ್ದೆಯಲ್ಲಿ ಈ ಮೊದಲು ಪ್ರೊ.ಬಿ.ತಿಮ್ಮೇಗೌಡ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದರು. ಬಳಿಕೆ ಅವರು 2019ರ ಆಗಸ್ಟ್ 7ರಂದು ನಿವೃತ್ತರಾಗಿದ್ದರು. ನಂತರ ಈ ಹುದ್ದೆಯಲ್ಲಿ ಡಾ.ಸುರೇಶ್ ವಿ.ನಾಡಗೌಡರ್ ಅವರು ಹಂಗಾಮಿ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.