Job Description: ನವದೆಹಲಿ: ಭಾರತ-ಚೀನಾ ರಾಷ್ಟ್ರಗಳ ಮಧ್ಯೆ ದ್ವೇಷಮಯ ಸ್ಥಿತಿ ಮುಂದುವರಿದಿದ್ದು, ಪ್ರಧಾನಿ ಮೋದಿಯವರು ಈ ಕುರಿತು ಚರ್ಚಿಸಲು ಎಲ್ಲ ಸೇನಾ ವಿಭಾಗಗಳ ಮುಖ್ಯಸ್ಥರುಗಳೊಡನೆ ಉನ್ನತ ಮಟ್ಟದ ಸಭೆ ನಡೆಸಿದರು. ಈ ಸಭೆಯಲ್ಲಿ ಭಾರತದ ರಕ್ಷಣಾ ಸಲಹೆಗಾರರಾದ ಅಜಿತ್ ದೋವಲ್, ಮೂರೂ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಕೂಡ ಭಾಗವಹಿಸಿದ್ದರು. ಚೀನಾವು ಸಂಭಾವ್ಯ ಗಡಿ ಉಲ್ಲಂಘನೆಯ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಈ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.