Job Description: ಚಂಡೀಗಢ : ಸ್ವತಂತ್ರ ಭಾರತದ ಮೊಟ್ಟಮೊದಲ ಕ್ರೀಡಾತಾರೆ ಹಾಗೂ ಮೂರು ಒಲಿಂಪಿಕ್ಸ್ ಸ್ವರ್ಣ ಪದಕಗಳ ಒಡೆಯರಾದ ಹಾಕಿ ದಿಗ್ಗಜ ಬಲ್ಬೀರ್ ಸಿಂಗ್ ಸೀನಿಯರ್ ಅವರು ತಮ್ಮ 96 ನೇ ವಯಸ್ಸಿನಲ್ಲಿ ಆರೋಗ್ಯ ಸಮಸ್ಯೆಯಿಂದ ನಿಧನರಾದರು. * 1923ರ ಡಿಸೆಂಬರ್ 31ರಂದು ಪಂಜಾಬ್ನ ಹರಿಪುರ ಖಲ್ಸಾ ಗ್ರಾಮದಲ್ಲಿ ಜನನ * ಹಲವಾರು 'ಬಲ್ಬೀರ್ ಸಿಂಗ್' ಹೆಸರಿನ ಆಟಗಾರರು ಹಾಕಿಗೆ ಪ್ರವೇಶ ಪಡೆದ ಕಾರಣ ಅವರ ಹೆಸರಿಗೆ 'ಸೀನಿಯರ್' ಎಂಬ ವಿಶೇಷ ಪದ ಸೇರ್ಪಡೆಗೊಂಡಿತ್ತು. * ಅವರ ಆತ್ಮಕತೆ 'ದಿ ಗೋಲ್ಡನ್ ಹ್ಯಾಟ್ರಿಕ್, ಮೈ ಹಾಕಿ ಡೇಸ್' 1977ರಲ್ಲಿ ಬಿಡುಗಡೆಯಾಗಿತ್ತು. * ಕಳೆದ ವರ್ಷ ಪಂಜಾಬ್ ಸರ್ಕಾರದಿಂದ ಅವರಿಗೆ "ಮಹಾರಾಜಾ ರಂಜಿತ್ ಸಿಂಗ್" ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. * ಸ್ವಾತಂತ್ರ್ಯದ ಬಳಿಕ ಭಾರತ ತಂಡ ಆಡಿದ ಮೊಟ್ಟಮೊದಲ ಒಲಿಂಪಿಕ್ಸ್ನಲ್ಲಿ (1948) ಬಲ್ಬೀರ್ ಸ್ವರ್ಣ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. * ಬ್ರಿಟನ್ ವಿರುದ್ಧದ ಫೈನಲ್ನಲ್ಲಿ 4-0 ಗೆಲುವಿನ ವೇಳೆ 2 ಗೋಲು ಬಲ್ಬೀರ್ ಸ್ಟಿಕ್ನಿಂದಲೇ ಸಿಡಿದಿದ್ದವು. * 1956ರ ಒಲಿಂಪಿಕ್ಸ್ನಲ್ಲಿ ಸ್ವರ್ಣ ಜಯಿಸಿದ ಭಾರತ ತಂಡಕ್ಕೆ ನಾಯಕರೂ ಆಗಿದ್ದರು. ಭಾರತ ಪರ 61 ಪಂದ್ಯಗಳಲ್ಲಿ 246 ಗೋಲು ಸಿಡಿಸಿದ್ದಾರೆ. * ಒಲಿಂಪಿಕ್ಸ್ ಹಾಕಿ ಪಂದ್ಯದ ಫೈನಲ್ನಲ್ಲಿ ಗರಿಷ್ಠ ಗೋಲು ದಾಖಲಿಸಿದ ದಾಖಲೆ ಈಗಲೂ ಬಲ್ಬೀರ್ ಸಿಂಗ್ ಹೆಸರಿನಲ್ಲಿದೆ. 1952 ರಲ್ಲಿ ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ 6 ಗೋಲುಗಳ ಪೈಕಿ 5 ಗೋಲುಗಳನ್ನೂ ಇವರೇ ಸಿಡಿಸಿದ್ದರು.