Job Description: ಕಾಮನ್ವೆಲ್ತ್ ದಿನವು ಆಫ್ರಿಕಾ, ಏಷ್ಯಾ, ಕೆರಿಬಿಯನ್ ಮತ್ತು ಅಮೆರಿಕಾ, ಪೆಸಿಫಿಕ್ ಮತ್ತು ಯುರೋಪಿನ ರಾಷ್ಟ್ರಗಳ ಜನರು ಆಚರಿಸುವ ವಾರ್ಷಿಕ ಆಚರಣೆಯಾಗಿದೆ. ಕಾಮನ್ವೆಲ್ತ್ ದಿನದ ಇತಿಹಾಸ : 1916 ರ ನಂತರ ವಿಕ್ಟೋರಿಯಾ ರಾಣಿಯ ಜನನದ ಸಂಭ್ರಮಾಚರಣೆಯಾಗಿ ಕಾಮನ್‌ವೆಲ್ತ್ ದಿನವನ್ನು ಈ ಹಿಂದೆ ಎಂಪೈರ್ ಡೇ ಎಂದು ಆಚರಿಸಲಾಗುತ್ತಿತ್ತು. 1958 ರಲ್ಲಿ, ಯುನೈಟೆಡ್ ಕಿಂಗ್‌ಡಂನ ಅಂದಿನ ಪ್ರಧಾನ ಮಂತ್ರಿ ಹೆರಾಲ್ಡ್ ಮ್ಯಾಕ್‌ಮಿಲನ್ ಸಂಸತ್ತಿನಲ್ಲಿ ಸಾಮ್ರಾಜ್ಯದ ದಿನವನ್ನು ಕಾಮನ್‌ವೆಲ್ತ್ ದಿನ ಎಂದು ಮರುನಾಮಕರಣ ಮಾಡಿದರು. ಆಚರಣೆ : ಕಾಮನ್ವೆಲ್ತ್ ದಿನವನ್ನು ಪ್ರಪಂಚದಾದ್ಯಂತ ವಿವಿಧ ರಾಷ್ಟ್ರಗಳಲ್ಲಿ ವಿವಿಧ ದಿನಾಂಕದಂದು ಆಚರಿಸಲಾಗುತ್ತದೆ. UK, ಆಸ್ಟ್ರೇಲಿಯಾ ಮತ್ತು ಕೆನಡಾದಲ್ಲಿ ಮಾರ್ಚ್ ಎರಡನೇ ಸೋಮವಾರದಂದು ದಿನವನ್ನು ಆಚರಿಸಿದರೆ, ಮತ್ತೊಂದೆಡೆ, ಭಾರತ ಸೇರಿ ಹಲವು ದೇಶಗಳು ಮೇ 24 ರಂದು ಕಾಮನ್‌ವೆಲ್ತ್ ದಿನವನ್ನು ಆಚರಿಸುತ್ತವೆ. * 2020 ರ ಕಾಮನ್ವೆಲ್ತ್ ದಿನದ ಘೋಷವಾಕ್ಯ : Delivering a Common Future * 2019 ರ ಕಾಮನ್ವೆಲ್ತ್ ದಿನದ ಘೋಷವಾಕ್ಯ : A Connected Commonwealth