Job Description: ಭಾರತ ಮತ್ತು ಬಾಂಗ್ಲಾದೇಶದ ಒಳನಾಡಿನ ಜಲ ಸಾರಿಗೆ ಮತ್ತು ವ್ಯಾಪಾರ ಶಿಷ್ಟಾಚಾರದ ಎರಡನೇ ಅನುಬಂಧಕ್ಕೆ ಬಾಗ್ಲಾದೇಶದಲ್ಲಿ ಸಹಿ ಹಾಕಲಾಯಿತು. * ಈ ನೂತನ ಒಪ್ಪಂದಡಿಯಲ್ಲಿ ಉಭಯ ದೇಶಗಳು ನಿಗದಿಪಡಿಸಿದ ಮಾರ್ಗದಲ್ಲಿ ಸಂಚರಿಸಬಹುದು. ಅಲ್ಲದೆ, ಭಾರತದ ಧುಬ್ರಿ ಮತ್ತು ಬಾಗ್ಲಾದೇಶದ ಚಿಲ್ಮರಿ ನಡುವೆ ಆಳವಿಲ್ಲದ ಯಾಂತ್ರಿಕೃತ ಹಡಗುಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. * ಸಹಿ ಮಾಡಿದ ಹೊಸ ಅನುಬಂಧದ ಅಡಿಯಲ್ಲಿ, ಇಂಡೋ ಬಾಂಗ್ಲಾದೇಶದ ಮಾರ್ಗಗಳ ಸಂಖ್ಯೆಯನ್ನು 8 ರಿಂದ 10 ಕ್ಕೆ ಹೆಚ್ಚಿಸಲಾಗಿದೆ. * ಭಾರತಕ್ಕೆ ಆಹಾರ ಧಾನ್ಯಗಳು, ಕೃಷಿ ಉತ್ಪನ್ನಗಳು, ರಸಗೊಬ್ಬರಗಳು, ಧಾರಕ ಸರಕು ಮತ್ತು ಸಿಮೆಂಟ್ ಸಾಗಿಸಲು ಒಳನಾಡಿನ ಜಲಸಾರಿಗೆ ಮುಖ್ಯವಾಗಿದೆ.