Job Description: ಭಾರತ ಸರ್ಕಾರದ ನವೀಕರಿಸಬಹುದಾದ ಇಂಧನ ಸಚಿವಾಲಯವು ಕೊನಾರ್ಕ್ ಪಟ್ಟಣ ಮತ್ತು ಕೊನಾರ್ಕ್ ಐತಿಹಾಸಿಕ ಸೂರ್ಯ ದೇವಾಲಯವನ್ನು ಸಂಪೂರ್ಣವಾಗಿ ಅಂದರೆ 100% ಸೌರೀಕರಣಗೊಳಿಸುವ ಯೋಜನೆಯನ್ನು ಆರಂಭಿಸಿದೆ. * ಸೌರ ಶಕ್ತಿ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಈ ಯೋಜನೆಯಡಿ ಕೊನಾರ್ಕ್ ಪಟ್ಟಣದ ಐತಿಹಾಸಿಕ ಸೂರ್ಯ ದೇವಾಲಯದ ಮತ್ತು ಪಟ್ಟಣವನ್ನು ಅಭಿವೃದ್ಧಿ ಪಡಿಸಲಾಗುವದು. * ಈ ಯೋಜನೆಯಡಿ 10 ಮೆಗಾವ್ಯಾಟ್ ಗ್ರಿಡ್ ಸಂಪರ್ಕಿತ ಸೌರಶಕ್ತಿಯನ್ನು ಸೌರ ಕುಡಿಯುವ ನೀರಿನ ಕಿಯೋಸ್ಕ್ಗಳು, ಸೌರ ಮರಗಳು ಮತ್ತು ಆಫ್ ಗ್ರಿಡ್ ಸೌರ ವಿದ್ಯುತ್ ಸ್ಥಾವರಗಳಂತಹ ಉಪಕರಣಗಳನ್ನು ಅಳವಡಿಸುವ ಮೂಲಕ ಉತ್ಪಾದಿಸಲಾಗುವದು. * ಕೊನಾರ್ಕ್ ಸೂರ್ಯ ದೇವಾಲಯ : ಈ ದೇವಾಲಯವನ್ನು 13 ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಇದನ್ನು ರಾಜ ನರಸಿಂಹದೇವ 1 ನಿರ್ಮಿಸಿದ. ದೇವಾಲಯವನ್ನು ರಥದ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ. ಇದನ್ನು 1984 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಯಿತು.