Job Description: ನವದೆಹಲಿ : ಜರ್ಮನಿಯ ಮೂಲದ ಪಾದರಕ್ಷೆ ತಯಾರಿಕಾ ಕಂಪನಿಯಾದ "ವಾನ್ ವೆಲೆಕ್ಸ್" ಪ್ರಸ್ತುತ ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನ ತಯಾರಿಕಾ ಘಟಕವನ್ನು ಭಾರತಕ್ಕೆ ಸ್ಥಳಾಂತರಿಸಲು ನಿರ್ಧರಿಸಿದೆ. ಈ ಕಂಪನಿಯು ಪ್ರತಿ ವರ್ಷ 30 ಲಕ್ಷಕ್ಕೂ ಹೆಚ್ಚು ಜೋಡಿಯ ಶೂಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿರುವ ತನ್ನ ಘಟಕವನ್ನು ಭಾರತಕ್ಕೆ ಸ್ಥಳಾಂತರ ಮಾಡಲು ಮುಂದಾಗಿದ್ದು, ಸುಮಾರು ₹ 110 ಕೋಟಿ ರೂಪಾಯಿಯಷ್ಟು ಹೂಡಿಕೆ ಮಾಡಲಿದೆ. * ಭಾರತದ ಉತ್ತರ ಪ್ರದೇಶ ರಾಜ್ಯದಲ್ಲಿ ನೂತನ ಘಟಕ ಸ್ಥಾಪನೆ ಮಾಡಲು ಸಂಸ್ಥೆ ಉದ್ದೇಶಿಸಿದ್ದು "ಲಾಟ್ರಿಕ್ ಇಂಡಸ್ಟ್ರೀಸ್ ಪ್ರವೇಟ್ ಲಿಮಿಟೆಡ್" ಜತೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ.