Job Description: ನವದೆಹಲಿ : ಭಾರತ ಸರ್ಕಾರದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ್ ವರ್ಧನ್ ಅವರು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಪ್ರಸ್ತುತ ಹುದ್ದೆ ನಿರ್ವಹಿಸುತ್ತಿರುವ ಜಪಾನ್ನ ಡಾ.ಹಿರೋಕಿ ನಕಾಟಾನಿ ಅವರ ಸ್ಥಾನದಲ್ಲಿ ಹರ್ಷ್ ವರ್ಧನ್ ಮುಂದುವರೆಯಲಿದ್ದಾರೆ. ಒಟ್ಟು 34 ಸದಸ್ಯರಿರುವ ವಿಶ್ವ ಅರೋಗ್ಯ ಸಂಸ್ಥೆಯ (WHO) ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಹರ್ಷ್ ವರ್ಧನ್ ಅವರು ಇದೆ ಮೇ 22, ರ ಶುಕ್ರವಾರದಂದು ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ. * ಮೇ 19 ರಂದು ನಡೆದ 194 ಸದಸ್ಯ ಬಲದ ವಿಶ್ವ ಆರೋಗ್ಯ ಅಧಿವೇಶನದಲ್ಲಿ ಭಾರತಕ್ಕೆ ಎಕ್ಸಿಕ್ಯೂಟಿವ್ ಬೋರ್ಡ್ ಛೇರ್ಮನ್ ಸ್ಥಾನ ನೀಡಲು ಅಂಕಿತ ಹಾಕಲಾಯಿತು. * 3 ವರ್ಷದ ಅವಧಿಗೆ ಈ ನೇಮಕಾತಿ ನಡೆದಿದ್ದು, ಮೊದಲ ವರ್ಷ ಡಾ. ಹರ್ಷ್ ವರ್ಧನ್ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವರು. ಉಳಿದ 2 ವರ್ಷ ಬೇರೆ ದೇಶದ ಪ್ರತಿನಿಧಿಗಳು ಆ ಸ್ಥಾನ ಮುಂದುವರೆಸಿದ್ದಾರೆ.