Job Description: ನವದೆಹಲಿ : ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳನ್ನು ವ್ಯಾಪಿಸಿ ಆರ್ಭಟಿಸುತ್ತಿರುವ ಮಾರಕ ಕೊರೋನಾ ವೈರಸ್ ವಿರುದ್ಧ ಹೋರಾಡಲು ಗರಿಷ್ಠ ಪ್ರಮಾಣದ ದೇಣಿಗೆ ನೀಡಿದ ಜಗತ್ತಿನ ಉದ್ಯಮಿಗಳ ಪಟ್ಟಿಯಲ್ಲಿ ಭಾರತದ ಖ್ಯಾತ ಉದ್ಯಮಿ ಹಾಗೂ ವಿಪ್ರೋ ಸಂಸ್ಥಾಪಕ ಅಜೀಮ್ ಪ್ರೇಮ್ ಜಿ ಅವರು ಜಾಗತಿಕ 3ನೇ ಸ್ಥಾನ ಪಡೆದಿದ್ದಾರೆ. ಅಜೀಮ್ ಪ್ರೇಮ್ ಜೀ ಅವರು, ಒಟ್ಟು 1,125 ಕೋಟಿಗಳನ್ನು ಕೊರೋನಾ ವಿರುದ್ಧ ಹೋರಾಡಲು ನೀಡಿದ್ದರು. ಈ ಕುರಿತಂತೆ ನಿಯತಕಾಲಿಕೆ ಫೋರ್ಬ್ಸ್ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಅತೀ ಹೆಚ್ಚು ದೇಣಿಗೆ ನೀಡಿದ ಉದ್ಯಮಿಗಳ ಪಟ್ಟಿಯಲ್ಲಿ ಅಜೀಂ ಪ್ರೇಮ್ ಜಿ ಅವರು ಅತೀ ಹೆಚ್ಚು ದೇಣಿಗೆ ನೀಡಿದ ಭಾರತದ ಮೊದಲ ವಿಶ್ವದ ಮತ್ತು ವಿಶ್ವದ ಮೂರನೇ ಉದ್ಯಮಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. * ರೂ.7,549 ಕೋಟಿಗಳನ್ನು ನೀಡಿರುವ ಟ್ವಿಟರ್ ಸಿಇಓ ಜಾಕ್ ಡೋರ್ಸೆ ಅವರು ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.