Job Description: ದಿನಾಂಕ ಮೇ 9, 2015 ರಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಆರಂಭಿಸಿದ “ಅಟಲ್ ಪಿಂಚಣಿ ಯೋಜನೆ” ಯು ಇದೆ 2020 ರ ಮೇ 09 ನೇ ದಿನಾಂಕದಂದು ಯಶಸ್ವೀ 5 ವರ್ಷಗಳನ್ನು ಪೂರೈಸಿದೆ. 2020 ರ ಮೇ 9 ರ ವೇಳೆಗೆ ಈ ಯೋಜನೆಯಡಿ ಒಟ್ಟು 2,23,54,028 ಜನರ ದಾಖಲಾತಿ ಆಗಿದೆ. ಅಟಲ್ ಪಿಂಚಣಿ ಯೋಜನೆ : ಈ ಯೋಜನೆಯನ್ನು 18 ರಿಂದ 40 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಚಂದಾದಾರರಾಗಬಹುದಾಗಿದ್ದು. ನೊಂದಣಿಯಾದವರಿಗೆ ಈ ಯೋಜನೆಯು 60 ವರ್ಷ ದಾಟಿದ ಮೇಲೆ ಕನಿಷ್ಠ 1000 ರಿಂದ 5000 ರೂ.ಗಳ ಪಿಂಚಣಿ ನೀಡಲಾಗುತ್ತದೆ. * ಈ ಯೋಜನೆಯನ್ನು ಪಿಎಂ ಮೋದಿ ಅವರು 2015 ರಲ್ಲಿ ಕೋಲ್ಕತ್ತಾದಲ್ಲಿ ಪ್ರಾರಂಭಿಸಿದರು.