Job Description: ನವದೆಹಲಿ : ಭಾರತದ ಪ್ಯಾರಾ ಅಥ್ಲೀಟ್ ದೀಪಾ ಮಲಿಕ್ ಅವರು ತಮ್ಮ ಕ್ರೀಡಾ ವೃತ್ತಿ ಬದುಕಿಗೆ ವಿದಾಯ ಘೋಷಿಸಿದರು. ಇವರು ಪ್ಯಾರಾಲಿಂಪಿಕ್ ಕಮಿಟಿ ಆಫ್ ಇಂಡಿಯಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಷ್ಟ್ರೀಯ ಕ್ರೀಡಾ ನೀತಿ-ಮಾರ್ಗದರ್ಶಿಯ ಅನುಸಾರ ಅಥ್ಲೆಟಿಕ್ಸ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದರು. ದೀಪಾ ಮಲಿಕ್ ಅವರು ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಭಾರತದ ಮೊದಲ ಪ್ಯಾರಾ ಅಥ್ಲೀಟ್ ಆಗಿದ್ದಾರೆ. ಅಲ್ಲದೆ 58 ರಾಷ್ಟ್ರೀಯ ಹಾಗೂ 23 ಅಂತರಾಷ್ಟ್ರೀಯ ಪದಕಗಳನ್ನು ಜಯಿಸಿದ್ದಾರೆ. 2012 ರಲ್ಲಿ ಅರ್ಜುನ ಹಾಗೂ 2017 ರಲ್ಲಿ ಪದ್ಮಶ್ರೀ ಗೌರವಕ್ಕೆ ಕೂಡ ದೀಪಾ ಮಲಿಕ ಪಾತ್ರರಾಗಿದ್ದಾರೆ.