Job Description: ಹೊಸದಿಲ್ಲಿ : ಭಾರತದ ಫುಟ್ಬಾಲ್ ದಂತಕತೆಯಾದ ದಿಗ್ಗಜ ಚುನಿ ಗೋಸ್ವಾಮಿ ಅವರು ತಮ್ಮ 82 ವಯಸ್ಸಿನಲ್ಲಿ ದಿನಾಂಕ 30 ಏಪ್ರಿಲ್ 2020 ರಂದು ವಿಧಿವಶರಾದರು, ಇವರು 1962ರ ಏಶ್ಯನ್ ಗೇಮ್ಸ್ ನಲ್ಲಿ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿ ಚಿನ್ನದ ಪದಕ ವಿಜೇತರಾಗಿದ್ದರು. * ಫುಟ್ಬಾಲ್ ಆಟಗಾರನಾಗಿ ಭಾರತದ ಪರ ಗೋಸ್ವಾಮಿ 1956 ರಿಂದ 1964ರ ತನಕ ಸುಮಾರು 50 ಪಂದ್ಯಗಳಲ್ಲಿ ಭಾಗವಹಿಸಿದ್ದರು ಅಲ್ಲದೆ ಕ್ರಿಕೆಟಿಗನಾಗಿ ಬಂಗಾಳ ತಂಡವನ್ನು 1962 ರಿಂದ 1973ರ ತನಕ 46 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದರು.