Job Description: ಹೊಸದಿಲ್ಲಿ : 1993ರ ಸಾಲಿನ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯಾಗಿದ್ದ ಸಿಬಿ ಜಾರ್ಜ್ ಅವರು ಕುವೈತ್‌ಗೆ ಭಾರತದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಈ ಮೊದಲು ಇವರು ಕೈರೋ, ದೋಹಾ, ಇಸ್ಲಾಮಾಬಾದ್, ಟೆಹರಾನ್, ರಿಯಾದ್, ಸ್ವಿಟ್ಜರ್‌ಲ್ಯಾಂಡ್ ಹಾಗೂ ವಾಶಿಂಗ್ಟನ್ ಸೇರಿದಂತೆ ವಿಶ್ವದ ವಿವಿಧ ದೇಶದಗಳ ರಾಜದಾನಿಗಳಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಮೂಲತಃ ಕೇರಳದ ಕೊಟ್ಟಾಯಂ ಜಿಲ್ಲೆಯವರಾದ ಸಿಬಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣಗಳಲ್ಲಿ ಚಿನ್ನದ ಪದಕ ವಿಜೇತರು. ಅರೇಬಿಕ್ ಭಾಷೆಯಲ್ಲಿಯೂ ಅವರು ಡಿಪ್ಲೊಮಾ ಪಡೆದಿದ್ದಾರೆ.