Job Description: ನವದೆಹಲಿ: ಜಾಗತಿಕ ರೌಂಡ್ ಯೂನಿವರ್ಸಿಟಿ ರ್ಯಾಂಕಿಂಗ್ ಬಿಡುಗಡೆಗೊಂಡಿದ್ದು ಈ ರ್ಯಾಂಕಿಂಗ್ ಪಟ್ಟಿಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISC) ಯು ಟಾಪ್ 100 ಅಥವಾ ಡೈಮಂಡ್ ಲೀಗ್‌ನಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ವಿಶ್ವ ವಿದ್ಯಾಲಯವಾಗಿದೆ. * 2019 ರಲ್ಲಿ 84ನೇ ಸ್ಥಾನದಲ್ಲಿದ್ದ IISC ಯು ಈ ಬಾರಿ 62ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. * ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ದೆಹಲಿ 249 ಸ್ಥಾನ ಗಳಿಸಿದೆ. * ಐಐಟಿ-ಮದ್ರಾಸ್ 271 ಮತ್ತು ಪುಣೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್ 287 ನೇ ಸ್ಥಾನದಲ್ಲಿದೆ. * ಜಾಗತಿಕ ಮಟ್ಟದಲ್ಲಿ ಯುಎಸ್‌ಎ ಹಾರ್ವರ್ಡ್ ವಿಶ್ವವಿದ್ಯಾಲಯ ಅಗ್ರಸ್ಥಾನದಲ್ಲಿದೆ. * ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಕ್ಯಾಲ್ಟೆಕ್) ಎರಡೇ ಸ್ಥಾನದಲ್ಲಿದೆ.