Job Description: C3S (Copernicus Climate Change Service) ಮತ್ತು CAMS (Copernicus Atmosphere Monitoring Service) ಓಜೋನ್ ಪದರದ ರಂಧ್ರವು ಸ್ವತಃ ಗುಣಮುಖವಾಗಿದೆ ಎಂದು ದೃಢಪಡಿಸಿವೆ. ಓಜೋನ್ ಪದರದ ರಂಧ್ರವು 1 ಮಿಲಿಯನ್ ಚದರ ಕಿಲೋಮೀಟರ್ ನಷ್ಟು ಅಗಲವಿತ್ತು ಮತ್ತು ಈ ರಂಧ್ರವನ್ನು ವಿಜ್ಞಾನಿಗಳು ಮಾರ್ಚ್ 2020 ರಲ್ಲಿ ಗುರುತಿಸಿದ್ದರು. ಅಸಾಮಾನ್ಯವಾದ ಹವಾಮಾನ ಪರಿಸ್ಥಿತಿಗಳಿಂದ ಇದು ರೂಪುಗೊಂಡಿತ್ತು. * COVID-19 ಲಾಕ್ ಡೌನ್ ಕಾರಣದಿಂದಾಗಿ ಮಾಲಿನ್ಯದ ಮಟ್ಟ ಕಡಿಮೆಯಾಗಿದೆ ಹಾಗು ದ್ರುವ ಸುಳಿಯಿಂದಾಗಿ ರಂಧ್ರವು ಸ್ವತಃ ಮುಚ್ಚಿಕೊಂಡಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಓಜೋನ್ ಪದರ : ಭೂಮಿಯ ವಾಯುಮಂಡಲದ ರಕ್ಷಣಾ ಕವಚವಾಗಿದ್ದು ಅದು ಸೂರ್ಯನಿಂದ ಹಾನಿಕಾರಕ ಯುವಿ ವಿಕಿರಣದಿಂದ ಭೂ ಗ್ರಹವನ್ನು ರಕ್ಷಿಸುತ್ತದೆ.