Job Description: ಜೆನೆವಾ (ಸ್ವಿಡ್ಜರ್ಲ್ಯಾಂಡ್) : ಕೋವಿಡ್-19 ಸೋಂಕು ಈ ಭೂಮಿ ಮೇಲೆ ಕೆಲ ಸಮಯಗಳವರೆಗೆ ಇರಬಹುದಾದ ಸೋಂಕಾಗಿದ್ದು, ಇದನ್ನು ನಿಯಂತ್ರಿಸುವಲ್ಲಿ ಬಹುತೇಕ ರಾಷ್ಟ್ರಗಳು ಇನ್ನು ಮೊದಲ ಹೆಜ್ಜೆಯಲ್ಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕೊರೋನಾ ವೈರಸ್ ಪ್ರಕರಣಗಳು ಕಡಿಮೆಯಾಗಿದ್ದನ್ನು ಪರಿಗಣಿಸಿ ನಿಯಂತ್ರಣದಲ್ಲಿದೆ ಎಂದು ಕೆಲ ದೇಶಗಳು ಭಾವಿಸಿದ್ದು, ಆದರೆ ಅಲ್ಲಿ ಮತ್ತೆ ಸೋಂಕು ಕಂಡುಬರುತ್ತಿದೆ, ದೇಶಗಳು ಈ ಬಗ್ಗೆ ಜಾಗ್ರತೆ ವಹಿಸಿ ಸನ್ನದ್ಧವಾಗುವಂತೆ ವಿಶ್ವ ಆರೋಗ್ಯ ಸಂಸ್ಥೆ ಜನವರಿ 30ರಂದೇ ಇದನ್ನು "ಜಾಗತಿಕ ತುರ್ತು ಆರೋಗ್ಯ ಸಮಸ್ಯೆ" ಎಂದು ಘೋಷಿಸಿತ್ತು, ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅದ್ಹನೊಮ್ ಗೆಬ್ರೆಯೆಸಸ್ ತಿಳಿಸಿದ್ದಾರೆ