Job Description: ನೈಜೀರಿಯಾದ ಅಧ್ಯಕ್ಷ ಮುಹಮ್ಮದು ಬುಹಾರಿ ಅವರ ಮುಖ್ಯ ಸಹಾಯಕ ಅಬ್ಬಾ ಕ್ಯಾರಿ ಅವರು ಏಪ್ರಿಲ್ 17, 2020 ರಂದು COVID-19 ಸೋಂಕಿನಿಂದ ನಿಧನರಾದರು. ಹಲವು ದಿನಗಳಿಂದ ಅವರು ಕರೋನ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು. * ಅಬ್ಬಾ ಕಯಾರಿ(Abba Kyari) : ಅಬ್ಬಾ ಕ್ಯಾರಿ ನೈಜೀರಿಯಾದ ಅಧ್ಯಕ್ಷ ಮುಹಮ್ಮದು ಬುಹಾರಿ ಅವರ ಮುಖ್ಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಅವರು ಮಾಜಿ ಮಿಲಿಟರಿ ಆಡಳಿತಗಾರರಾಗಿದ್ದರು. * ಮುಹಮ್ಮದು ಬುಹಾರಿ : ಮುಹಮ್ಮದು ಬುಹಾರಿ ನೈಜೀರಿಯಾದ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. ಮತ್ತು ಅವರು 1983 ಮತ್ತು 1985 ರ ನಡುವೆ ಮಿಲಿಟರಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. 2014 ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜಯ ಸಾಧಿಸಿ ಪ್ರಸ್ತುತ ನೈಜೀರಿಯಾದ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿದ್ದಾರೆ.