Job Description: COVID-19 ಸೋಂಕಿನ ಪ್ರಕರಣಗಳ ನಿಖರ ಸಂಖ್ಯೆಯನ್ನು ಬಹಿರಂಗ ಪಡಿಸುವಲ್ಲಿ ಅನೇಕ ದೇಶಗಳು ಚೀನಾ ದೇಶದ ನಡೆಯನ್ನೇ ಅನುಸರಿಸುತ್ತಿವೆ ಎಂದು ಏಪ್ರಿಲ್ 18, 2020 ರಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. * ಚೀನಾದ ವುಹಾನ್ ಪ್ರಾಂತ್ಯವು COVID-19 ಸೋಂಕಿನ ಪ್ರಮುಖ ಕೇಂದ್ರಬಿಂದುವಾಗಿದೆ. ಚೀನಾ ದೇಶವು ಇತ್ತೀಚೆಗೆ COVID-19 ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆಯನ್ನು ಹಲವು ದಿನಗಳ ಬಳಿಕ 50% ರಷ್ಟು ಹೆಚ್ಚಿರುವುದಾಗಿ ತಿಳಿಸಿದೆ. WHO ಪ್ರಕಾರ, ವುಹಾನ್‌ನ ಆರೋಗ್ಯ ಅಧಿಕಾರಿಗಳು ಸೋಂಕು ಪ್ರಕರಣಗಳನ್ನು ಮುಚ್ಚಿಹಾಕಿದ್ದರು, ನಂತರ ಹಲವಾರು ವೈದ್ಯರು ಆನ್‌ಲೈನ್‌ನಲ್ಲಿ ಎಚ್ಚರಿಕೆ ನೀಡಿದ ಬಳಿಕೆ ನಂತರ ಸಂಖ್ಯೆಗಳನ್ನು ಪರಿಸ್ಕರಿಸಲಾಯಿತು.