Job Description: ಭಾರತ ವಿಶ್ವಬ್ಯಾಂಕ್-ಅಂತರರಾಷ್ಟ್ರೀಯ ಹಣಕಾಸು ನಿಧಿಯ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಭಾಗವಹಿಸಿತು. ಭಾರತದ ಪ್ರತಿನಿಧಿಯಾಗಿ ಕೇಂದ್ರ ಹಣಕಾಸು ಸಚಿವ ಶ್ರೀಮತಿ ನಿರ್ಮಲಾ ಸೀತಾರಾಮನ್ ಪ್ರತಿನಿಧಿಸಿದ್ದರು. * ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಈ ಅಭಿವೃದ್ಧಿ ಸಮಿತಿಯ 101 ನೇ ಸಭೆಯಲ್ಲಿ ಭಾರತ ಭಾಗವಹಿಸಿತು. * ಈ ಸಭೆಯಲ್ಲಿ ಭಾಗವಹಿಸಿದ ತಜ್ಞರು COVID-19 ನಿಂದ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಪ್ರತಿಕ್ರಿಯೆ ಕುರಿತು ಚರ್ಚಿಸಿದರು. * ಮುಂದಿನ 15 ತಿಂಗಳುಗಳವರೆಗೆ COVID-19 virudda ಹೋರಾಡಲು ವಿಶ್ವಬ್ಯಾಂಕನಿಂದ ದೊರೆಯುವ 150 ರಿಂದ 160 ಶತಕೋಟಿ ಡಾಲರ್ಗಳಷ್ಟು ಆರ್ಥಿಕ ಸಹಾಯವನ್ನು ಸಮಿತಿಯು ಸ್ವಾಗತಿಸಿತು. * ಅಭಿವೃದ್ಧಿ ಸಮಿತಿಯ ಮುಂದಿನ ಸಭೆಯನ್ನು 17 ಅಕ್ಟೋಬರ್ 2020 ರಂದು ನಿಗದಿಪಡಿಸಲಾಗಿದೆ.