Job Description: ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರ ಅನುಕೂಲಕ್ಕಾಗಿ BBMP ಯಿಂದ 'ಸಹಾಯ ಸೇತುವೆ' ಎಂಬ ಹೊಸ ಅಪ್ಲಿಕೇಶನ್ ಆರಂಭಿಸಲಾಯಿತು. ಈ ಅಪ್ಲಿಕೇಶನ್ ಯಿಂದ ಇಂದಿರಾ ಕ್ಯಾಂಟೀನ್, ಫೀವರ್ ಕ್ಲಿನಿಕ್ ಸೇರಿದಂತೆ ಇನ್ನಿತರ ಹಲವು ಅಗತ್ಯ ಮಾಹಿತಿಗಳನ್ನು ಪಡೆಯಬಹುದಾಗಿದೆ. ದೇಶದಲ್ಲಿ ಕೊರೊನಾ ಹರಡದಂತೆ ಸುರಕ್ಷೆತೆಗಾಗಿ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು ಈ ಸಮಯದಲ್ಲಿ ಜನರ ಸುರಕ್ಷತೆ ಹಾಗೂ ನಿರ್ಗತಿಕರ ಬಗ್ಗೆ ಕಾಳಜಿಗಾಗಿ ಈ ನೂತನ 'ಸಹಾಯ ಸೇತುವೆ' ಎಂಬ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ.