Job Description: ನವದೆಹಲಿ : ದೇಶದಲ್ಲಿ ವ್ಯಾಪಿಸುತ್ತಿರುವ ಕರೋನ ವೈರಸ್ ನಿಯಂತ್ರಿಸಲು ಸಲುವಾಗಿ ಭಾರತದಲ್ಲಿ ಎರಡನೇ ಹಂತದ ಲಾಕ್-ಡೌನ್ ಮೇ 03 ರ ವರೆಗೆ ವಿಧಿಸಿ ಪ್ರಧಾನಿ ಮೋದಿಯವರು ಮಂಗಳವಾರ (ಏಪ್ರಿಲ್ 14) ತಮ್ಮ ಭಾಷಣದಲ್ಲಿ ಘೋಷಿಸಿದರು. * ಮಾರ್ಚ್ 23 ರಿಂದ ಏಪ್ರಿಲ್ 14ರ ತನಕ ಮೊದಲನೇ ಹಂತದ 21 ದಿನಗಳ ಲಾಕ್ಡೌನ್ ಈಗಾಗಲೇ ಪೂರ್ಣಗೊಂಡಿದೆ. ಪ್ರಧಾನಿಯವರು ತಮ್ಮ ಭಾಷಾದ ವೇಳೆ ಜನರಿಗೆ ಸಪ್ತ ಸೂತ್ರಗಳನ್ನು ನೀಡಿದ್ದು ಅವುಗಳ ವಿವಿರ ಈ ಕೆಳಗಿನಂತಿದೆ: * ಮನೆಯಲ್ಲಿರುವ ವಯೋವೃದ್ಧರ ಬಗ್ಗೆ ಕಾಳಜಿ ವಹಿಸಿ * ಲಾಕ್ಡೌನ್ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಮನೆಯಲ್ಲೇ ತಯಾರಿಸಿದ ಮಾಸ್ಕ್ ಧರಿಸಿ * ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಯುಷ್ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಿ * ಆರೋಗ್ಯ ಸೇತು ಆಪ್ ಡೌನ್ಡೌಡ್ ಮಾಡಿ ಬಳಸಿ. * ಬಡವರು, ನಿರ್ಗತಿಕರ ಊಟ, ವಸತಿ ಬಗ್ಗೆ ನಿಗಾವಹಿಸಿ, ಅವರಿಗೆ ಸಹಾಯ ಮಾಡಿ. * ಯಾರನ್ನು ಕೆಲಸದಿಂದ ತೆಗೆಯಬೇಡಿ, ಕೃಷಿಕರ ಬೆಂಬಲಕ್ಕೆ ನಿಲ್ಲಿ, ವೈದ್ಯರು, ಪೊಲೀಸರು, ಪೌರ ಕಾರ್ಮಿಕರು ಮುಂತಾದ ಕೊರೊನಾ ವಾರಿಯರ್ಸ್ ಗೌರವಿಸಿ ಮತ್ತು ಸಹಕರಿಸಿ