Job Description: ವಾಷಿಂಗ್ಟನ್ : ಭಾರತಕ್ಕೆ 155 ದಶಲಕ್ಷ ಮೊತ್ತದ ಆಧುನಿಕ ಕ್ಷಿಪಣಿ ಮತ್ತು ಟಾರ್ಪೆಡೋ (ನೌಕಾ ಧ್ವಂಸಕ) ಗಳನ್ನು ಮಾರಾಟ ಮಾಡಲು ಅಮೆರಿಕ ಒಪ್ಪಿಗೆ ನೀಡಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಅಧಿಸೂಚನೆ ಪ್ರಕಟಿಸುವ ಮೂಲಕ ಈ ವಿಷಯವನ್ನು ಬಹಿರಂಗ ಪಡಿಸಿದೆ. ಈ ಒಪ್ಪಂದದ ಪ್ರಕಾರ ಅಮೆರಿಕಾವು ಭಾರತಕ್ಕೆ ಭೂಮಿಯಿಂದ ಗಗನಕ್ಕೆ ಚಿಮ್ಮುವ ಹರ್ಪೂನ್ ಕ್ಷಿಪಣಿಗಳು ಮತ್ತು ಹಗುರ ತೂಕ ಟಾರ್ಪೆಡೋಗಳನ್ನು (ಯುದ್ಧ ನೌಕೆ, ಸಬ್‍ಮರೀನ್ ಇತ್ಯಾದಿ ಧ್ವಂಸಕ) ಮಾರಾಟ ಮಾಡಲಿದೆ.