Job Description: ನವದೆಹಲಿ: ಮಲೇರಿಯಾ ರೋಗಕ್ಕೆ ಬಳಸುವ Hydroxychloroquine ಔಷಧಿ ಕರೋನ ವೈರಸ್ ಗೆ ಸೋಂಕಿತರರಿಗೆ ಚಿಕಿತ್ಸೆ ನೀಡಲು ಉತ್ತಮವಾದುದರಿಂದ ವಿವಿಧ 30 ದೇಶಗಳಿಂದ ಈ ಔಷಧಿಗಾಗಿ ಬೇಡಿಕೆ ಬಂದಿದ್ದರ ಹಿನ್ನಲೆ, ಹೈಡ್ರಾಕ್ಸಿಕ್ಲೋರೋಕ್ವಿನ್ ಕೇಳುವ 25 ದೇಶಗಳ ಮನವಿಯನ್ನು ಭಾರತ ಅಂಗೀಕರಿಸಿ ಔಷದಿ ರಫ್ತು ಮಾಡಲು ಅನುಮೋದನೆ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. * ಭಾರತದಲ್ಲಿರುವ ಒಟ್ಟು ಸಂಗ್ರಹವನ್ನು ಪರಿಶೀಲಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. * US ಸೇರಿದಂತೆ ಒಟ್ಟು 30 ದೇಶಗಳು ಈ ಔಷಧವನ್ನು ಗೇಮ್ ಚೇಂಜರ್ ಎಂದು ಕರೆದಿವೆ. * US ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಬ್ರೆಜಿಲಿನ್ ಅಧ್ಯಕ್ಷ ಜೈರ್ ಎಂ ಬೋಲ್ಸನಾರೊ ಅವರು ವಿನಂತಿಗಳನ್ನು ಅಂಗೀಕರಿಸಿದ್ದಕ್ಕಾಗಿ ಭಾರತಕ್ಕೆ ಧನ್ಯವಾದ ಅರ್ಪಿಸಿದ್ದಾರೆ.