Job Description: ಬೆಂಗಳೂರು : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯದ 30 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿ ಅಧಿಕೃತ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಬದಲಾವಣೆಗೊಂಡು ನೂತನವಾಗಿ ನೀಡಲಾಗಿರುವ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಈ ಕೆಳಗಿನಂತೆ ಇದೆ. ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ: ಬೆಂಗಳೂರು ನಗರ - ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಮನಗರ - ಡಿಸಿಎಂ ಡಾ.ಸಿಎಸ್ ಅಶ್ವಥ್ ನಾರಾಯಣ ರಾಯಚೂರು - ಡಿಸಿಎಂ ಲಕ್ಷ್ಮಣ್ ಸವದಿ ಬಾಗಲಕೋಟೆ ಮತ್ತು ಕಲಬುರ್ಗಿ - ಡಿಸಿಎಂ ಗೋವಿಂದ ಎಂ ಕಾರಜೋಳ ಶಿವಮೊಗ್ಗ - ಸಚಿವ ಕೆ ಎಸ್ ಈಶ್ವರಪ್ಪ ಬೆಂಗಳೂರು ಗ್ರಾಮಾಂತರ - ಸಚಿವ ಆರ್ ಅಶೋಕ್ ಬೆಳಗಾವಿ ಮತ್ತು ಧಾರವಾಡ- ಸಚಿವ ಜಗದೀಶ್ ಶೆಟ್ಟರ್ ಚಿತ್ರದುರ್ಗ - ಸಚಿವ ಬಿ ಶ್ರೀರಾಮುಲು ಚಾಮರಾಜನಗರ - ಸಚಿವ ಎಸ್ ಸುರೇಶ್ ಕುಮಾರ್ ಕೊಡಗು - ವಿ ಸೋಮಣ್ಣ ಚಿಕ್ಕಮಗಳೂರು - ಸಚಿವ ಸಿ.ಟಿ.ರವಿ ಹಾವೇರಿ ಮತ್ತು ಉಡುಪಿ - ಸಚಿವ ಬಸವರಾಜ್ ಬೊಮ್ಮಾಯಿ ದಕ್ಷಿಣ ಕನ್ನಡ - ಕೋಟಾ ಶ್ರೀನಿವಾಸ ಪೂಜಾರಿ ತುಮಕೂರು ಮತ್ತು ಹಾಸನ - ಸಚಿವ ಜೆ ಸಿ ಮಾಧುಸ್ವಾಮಿ ಗದಗ - ಸಚಿವ ಸಿಸಿ ಪಾಟೀಲ್ ಕೋಲಾರ - ಸಚಿವ ಹೆಚ್ ನಾಗೇಶ್ ಬೀದರ್ ಮತ್ತು ಯಾದಗಿರಿ - ಸಚಿವ ಪ್ರಭು ಚೌವ್ಹಾಣ ವಿಜಯಪುರ - ಸಚಿವೆ ಶಶಿಕಲಾ ಜೊಲ್ಲೆ ಉತ್ತರ ಕನ್ನಡ - ಸಚಿವ ಶಿವರಾಂ ಹೆಬ್ಬಾರ್ ಮೈಸೂರು - ಸಚಿವ ಎಸ್ ಟಿ ಸೋಮಶೇಖರ್ ಚಿಕ್ಕಬಳ್ಳಾಪುರ - ಸಚಿವ ಡಾ.ಕೆ.ಸುಧಾಕರ್ ಮಂಡ್ಯ - ಸಚಿವ ಕೆಸಿ ನಾರಾಯಣ ಗೌಡ ಬಳ್ಳಾರಿ - ಸಚಿವ ಆನಂದ್ ಸಿಂಗ್ ದಾವಣಗೆರೆ - ಸಚಿವ ಬಿಎ ಬಸವರಾಜು ಕೊಪ್ಪಳ - ಸಚಿವ ಬಿಸಿ ಪಾಟೀಲ್