Job Description: ನವದೆಹಲಿ : ಏಪ್ರಿಲ್ 8 ರ ಬೆಳಗ್ಗೆ 8 ಗಂಟೆಗೆ ಸೂಪರ್ ಮೂನ್ ಗೋಚರಿಸಲಿದೆ ಎಂದು ಭಾರತೀಯ ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ. ಏಪ್ರಿಲ್ 7 ರ ರಾತ್ರಿ ಉತ್ತರ ಅಮೆರಿಕಾ ಹಾಗೂ ಇತರ ರಾಷ್ಟ್ರಗಳಲ್ಲಿ ಸೂಪರ್ ಮೂನ್ ಗೋಚರಿಸಲಿದ್ದು, ಭಾರತದಲ್ಲಿ ಏಪ್ರಿಲ್ 8 ರ ಬೆಳಗ್ಗೆ 8 ಗಂಟೆಗೆ ಸೂರ್ಯನ ಬೆಳಕು ಇರುವುದರಿಂದ ವೀಕ್ಷಣೆಗೆ ತೊಡಕಾಗಬಹುದೆಂದು ಕೂಡ ತಿಳಿಸಿದ್ದಾರೆ. * ಏಪ್ರಿಲ್ 7 ರ ರಾತ್ರಿ ಹಾಗೂ ಏಪ್ರಿಲ್ 8 ರ ಬೆಳಗ್ಗೆ ಚಂದ್ರ ಭೂಮಿಯಿಂದ 3,56,000 ಕಿ.ಮೀ. ದೂರದಲ್ಲಿ ಪರಿಭ್ರಮಿಸುತ್ತದೆ. * ಉಳಿದ ದಿನಗಳಲ್ಲಿ ಚಂದ್ರ ಮತ್ತು ಭೂಮಿಯ ಸರಾಸರಿ ಅಂತರ 3,84,000 ಕಿ.ಮೀ. ಆಗಿರುತ್ತದೆ.