Job Description: ನವದೆಹಲಿ : ಟೋಕಿಯೊ ಒಲಿಂಪಿಕ್ಸ್ ಮುಂದಿನ ವರ್ಷ ಜುಲೈನಲ್ಲಿ ಮರುನಿಗದಿಯಾಗಿರುವುದು ಮತ್ತು ಮುಂದಿನ ವಿಶ್ವ ಚಾಂಪಿಯನ್ಷಿಪ್ 2021ರ ಆಗಸ್ಟ್ನಲ್ಲಿ ಸ್ಪೇನ್ ನಲ್ಲಿ ನಡೆಯಲಿರುವ ಕಾರಣ, ಮತ್ತು ಅದರ ಬೆನ್ನಲ್ಲೇ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ನಡೆಯುವುದು ಕೂಡ ಅನುಮಾನವೆನಿಸಿದೆ. ಈ ಎಲ್ಲ ಬೆಳವಣಿಗೆಗಳಿಂದ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುಗೆ 3 ವರ್ಷಗಳ ಕಾಲ ವಿಶ್ವ ಚಾಂಪಿಯನ್ ಆಗಿ ಉಳಿಯುವ ಅವಕಾಶವಿದೆ. ಪಿವಿ ಸಿಂಧು ಅವರು ಕಳೆದ ವರ್ಷದ ವಿಶ್ವ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಜಯಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯರೆಂಬ ಕೀರ್ತಿಗೆ ಪಾತ್ರರಾಗಿದ್ದರು.