Job Description: ಒಡಿಶಾ ಸರ್ಕಾರ ಇತ್ತೀಚೆಗೆ ಯುನಿಸೆಫ್ (ಯುನೈಟೆಡ್ ನೇಷನ್ಸ್ ಚಿಲ್ಡ್ರನ್ಸ್ ಫಂಡ್ಸ್) ಸಹಯೋಗದೊಂದಿಗೆ “ಮೊ ಪ್ರತಿವಾ (Mo Prativa)" ಕಾರ್ಯಕ್ರಮವನ್ನು ಪ್ರಾರಂಭಿಸಿತು. ಈ ಕಾರ್ಯಕ್ರಮದಲ್ಲಿ ಮಕ್ಕಳು ಘೋಷಣೆಗಳು, ರೇಖಾಚಿತ್ರಗಳು, ಸಣ್ಣ ಕಥೆ ಬರೆಯುವಿಕೆ, ವರ್ಣಚಿತ್ರಗಳು ಸೇರಿ ಮುಂತಾದ ಆನ್‌ಲೈನ್ ಸ್ಪರ್ಧೆಗಳಲ್ಲಿ ಮಕ್ಕಳಿಗೆ ಭಾಗವಹಿಸಲು ವಿವಿಧ ಕಾರ್ಯಕ್ರಮಗಳನ್ನು ಆರಂಭಿಸಲಾಗಿದೆ. * ಈ ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳು ತಮ್ಮ ಕಥೆ ಕವನ ರೇಖಾ ಚಿತ್ರಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ ಮತ್ತು ಪ್ರತಿ ವಾರ ಅವರಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ. * 5 ರಿಂದ 18 ವರ್ಷ ವಯಸ್ಸಿನ ಮಕ್ಕಳು ಈ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಘೋಷ ವಾಕ್ಯ : COVID-19 ಸಮಯದಲ್ಲಿ ಯುವ ಪ್ರಜೆಯಾಗಿ ನನ್ನ ಜವಾಬ್ದಾರಿ ಮತ್ತು ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿರುವುದು (My Responsibility as a young citizen during COVID-19 and Being at home during lockdown)