Job Description: ನವದೆಹಲಿ : ಸಮೀಪದಲ್ಲಿರೋ ಕರೊನಾ ವೈರಸ್ ಸೋಂಕಿತರನ್ನು ಪತ್ತೆಹಚ್ಚಲು ಕೇಂದ್ರ ಸರ್ಕಾರ ಗುರುವಾರ(ಏಪ್ರಿಲ್ 03)ರಂದು 'ಆರೋಗ್ಯ ಸೇತು' ಎಂಬ ಹೊಸ ಮೊಬೈಲ್ ಅಪ್ಲಿಕೇಶನ್ ಬಿಡುಗಡೆಗೊಳಿಸಿದೆ. * ಈ ನೂತನ "ಆರೋಗ್ಯ ಸೇತು" ಅನ್ನು Android ಮತ್ತು iOS ಮಾದರಿಯ ಮೊಬೈಲುಗಳ ಬಳಕೆದಾರರು ಉಪಯೋಗಿಸಬಹುದಾಗಿದೆ. * ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಷ್ಟ್ರೀಯ ಮಾಹಿತಿ ಕೇಂದ್ರ ಈ ನೂತನ ಆಯಪ್ ಅನ್ನು ಅಭಿವೃದ್ಧಿ ಪಡಿಸಿದೆ. * ಕೋವಿಡ್-19 ತಡೆಗಟ್ಟಲು ಸೂಕ್ತವಾದ ಸಲಹೆಗಳನ್ನ ಈ ಆಯಪ್ ಒದಗಿಸಲಿದೆ