Job Description: ನವದೆಹಲಿ : ಕೋವಿದ್-19 ನಿಂದ ದೇಶದಲ್ಲಿ ವಿಧಿಸಿರುವ ಲಾಕ್-ಡೌನ್ ನಿಂದಾಗಿ ತತ್ತರಿಸಿರುವ ದೇಶದ ಜನಧನ ಖಾತೆ ಹೊಂದಿರುವ ಮಹಿಳೆಯರಿಗೆ ಕೇಂದ್ರ ಸರ್ಕಾರವು 500 ರೂಪಾಯಿ ಯಂತೆ ಮೂರೂ ತಿಂಗಳು ನಗದು ಪಾವತಿಸುವಂತೆ ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿದೆ, ಈಗಾಗಲೇ ಮೊದಲ ಕಂತಿನ ಜಮಾ ಮಾಡುವ ಕಾರ್ಯ ಜಾರಿಯಲ್ಲಿದೆ. ಇದರಿಂದ ದೇಶದ ಮಹಿಳೆಯರಿಗೆ ಲಾಕ್ ಡೌನ್ ಸಮಯದಲ್ಲಿ ಎದುರಾಗಿರುವ ಆರ್ಥಿಕ ಹೊರೆಯನ್ನು ಕಡಿಮೆಮಾಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ.