Job Description: ಬೆಂಗಳೂರು: ಕೊವಿಡ್-19 (Covid-19) ಸಾಂಕ್ರಾಮಿಕ ವೈರಾಣುವಿಗೆ ಸಂಬಂಧಿತ ಮಾಹಿತಿ ಪಡೆಯಲು ಮತ್ತು ಜನರಿಗಿರುವ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಜನ ಸಾಮಾನ್ಯರೇ ನೇರವಾಗಿ ವೈದ್ಯರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಲು ಅನುಕೂಲವಾಗುವ 'ಟೆಲಿ ಕನ್ಸಲ್ಟೇಷನ್' ಯೋಜನೆಗೆ ರಾಜ್ಯದ ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ ದಿನಾಂಕ 01 ಏಪ್ರಿಲ್ 2020 ರಂದು ಚಾಲನೆ ನೀಡಲಿದ್ದಾರೆ. * ಪ್ರಾಯೋಗಿಕವಾಗಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಈ ಯೋಜನೆ ಜಾರಿಯಾಗಲಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಯೋಜನೆಯನ್ನು ವಿಸ್ತರಿಸುವ ಬಗ್ಗೆ ಸರ್ಕಾರ ಚಿಂತಿಸುತಿದೆ. * ಪೋರ್ಟಿಯಾ ಮೆಡಿಕಲ್ ಸಂಸ್ಥೆ ಈ ಸೇವೆ ನೀಡುತ್ತಿದ್ದು ತಜ್ಞ ವೈದ್ಯರ ತಂಡ ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ಸಾರ್ವಜನಿಕರ ಕರೆಗಳನ್ನ ಸ್ವೀಕರಿಸಿ ಜನರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ದೂರವಾಣಿ ಸಂಖ್ಯೆ: 08066744788